ರಾಜಧಾನಿಯಲ್ಲಿ ಮತ್ತೆ ಪೊಲೀಸರ ರಿವಾಲ್ವರ್ ಸದ್ದು ಮಾಡಿದೆ. ಹೆಣ್ಣೂರಿನ ಬಳಿ ಲಾರಿ ಚಾಲಕ ಕೇಶವ್ ಅವರನ್ನು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಅಭಿಷೇಕ್ಗೆ ಮಧ್ಯರಾತ್ರಿ ಪೊಲೀಸ್ ಗುಂಡು ಹೊಡೆದು ಬಂಧಿಸಿದ್ದಾರೆ.ಹೆಣ್ಣೂರು ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಡಿ.ಕುಲಕರ್ಣಿ ಹಾರಿಸಿದ ಗುಂಡು ತಗುಲಿ ಬಲಗಾಲಿಗೆ ಗಾಯಗೊಂಡಿರುವ ವಡ್ಡರಪಾಳ್ಯದ ಅಭಿಷೇಕ್(19)ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಂಧಿಸಲು ಹೋದಾಗ ಅಭಿಷೇಕ್ ಚಾಕುವಿನಿಂದ ಇರಿದಿದ್ದರಿಂದ ಗಾಯಗೊಂಡಿರುವ ಹೆಣ್ಣೂರು ಠಾಣೆಯ ಪೇದೆ ಸಂತೋಷ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಳೆದ