ಕೆಆರ್ ಮಾರುಕಟ್ಟೆನಲ್ಲಿ 4 ಅಡಿ ಜಾಗಕ್ಕೆ ವ್ಯಾಪಾರಿಯ ಬರ್ಬರ ಹತ್ಯೆ

ಬೆಂಗಳೂರು, ಬುಧವಾರ, 15 ಮೇ 2019 (14:09 IST)

ಬೆಂಗಳೂರು : ಫುಟ್ ಪಾತ್ ಮೇಲೆ ನಿಂಬೆ ಹಣ್ಣಿನ ಅಂಗಡಿ ಹಾಕಲು  4 ಅಡಿ ಜಾಗದ ವಿಚಾರಕ್ಕೆ ವ್ಯಾಪಾರಿಯೊಬ್ಬರನ್ನು ಹತ್ಯೆ ಮಾಡಿದ ಘಟನೆ  ಬೆಂಗಳೂರಿನ ಕೆಆರ್ ಮಾರುಕಟ್ಟೆನಲ್ಲಿ ನಡೆದಿದೆ.
ಭರತ್ ಹತ್ಯೆಯಾದ ವ್ಯಾಪಾರಿ. ಭರತ್ ಕುಟುಂಬ 40 ವರ್ಷಗಳಿಂದ ಮಾರುಕಟ್ಟೆಯಲ್ಲಿ ನಿಂಬೆಹಣ್ಣು ವ್ಯಾಪಾರ ಮಾಡುತ್ತಿದ್ದು, ಫುಟ್ ಪಾತ್ ಮೇಲೆ ನಿಂಬೆ ಹಣ್ಣಿನ ಅಂಗಡಿ ಹಾಕಲು 4 ಅಡಿ ಜಾಗಕ್ಕೆ ದಿನಕ್ಕೆ 500 ರೂ. ಕೊಡಬೇಕೆಂದು ರೌಡಿಶೀಟರ್ ಸಹಚರರು ನೀಡುತ್ತಿದ್ದರು.ಈ  ವಿಚಾರಕ್ಕೆ ರೌಡಿಶೀಟರ್ ಸಹಚರರು ಹಾಗೂ ಭರತ್ ನಡುವೆ ದಿನ ಜಗಳ ನಡೆಯುತ್ತಿತ್ತು.


ಈ ಹಿನ್ನಲೆಯಲ್ಲಿ ವ್ಯಾಪಾರಿ ಭರತ್ ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಮೀರ್ ಒಬ್ಬ ಕಳ್ಳ, ಆತ ವಾಚ್ ಮ್ಯಾನ್ ಕೆಲಸಕ್ಕೆ ನಾಲಾಯಕ್ ಎಂದ ಈಶ್ವರಪ್ಪ

ಹುಬ್ಬಳ್ಳಿ : ಆಗಾಗ ಮೈತ್ರಿ ಪಕ್ಷದ ನಾಯಕರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಬಿಜೆಪಿ ಮುಖಂಡ ...

news

ಜೀವ ಜಲಕ್ಕಾಗಿ ಜೀವ ಒತ್ತೆ ಇಡುತ್ತಿರೋ ಜನರು!

ಮಳೆಯಾಗದ ಹಿನ್ನಲೆಯಲ್ಲಿ ಕೆರೆಗಳು ಖಾಲಿ ಖಾಲಿಯಾಗಿದ್ದು, ಜನರು ಜೀವದ ಹಂಗು ತೊರೆದು ಜೀವಜಲಕ್ಕಾಗಿ ಹೋರಾಟ ...

news

ಬೋರ್ವೆಲ್ ಕರೆಂಟ್ ಕಟ್ ಮಾಡಿದ ಹೆಸ್ಕಾಂ; ಜನ್ರು ಮಾಡಿದ್ದೇನು?

ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ತಪ್ಪಿದ್ದಲ್ಲ. ಇಂಥ ಪರಿಸ್ಥಿತಿಯಲ್ಲಿ ಹೆಸ್ಕಾಂ ಮಾಡಬಾರದ ಕೆಲಸ ...

news

ತೋಟದ ಮನೆಯಲ್ಲಿ ಡಬಲ್ ಮರ್ಡರ್ ಕಾರಣ ಏನು?

ತಡರಾತ್ರಿ ತೋಟದ ಮನೆಯೊಂದರಲ್ಲಿ ವಯೋವೃದ್ಧ ದಂಪತಿ ಬರ್ಬರ ಹತ್ಯೆ ನಡೆದಿದೆ. ಇದರಿಂದ ಇಡೀ ಊರಿನ ಜನರು ...