Widgets Magazine

ಜನರಿಗೆ ಆಹಾರಗಳ ಕಿಟ್ ವಿತರಣೆ ಮಾಡಿದ ಶಾಸಕ

ರಾಯಚೂರು| pavithra| Last Modified ಬುಧವಾರ, 1 ಏಪ್ರಿಲ್ 2020 (11:54 IST)
ರಾಯಚೂರು : ಕೊರೊನಾ ಭೀತಿ ಹಿನ್ನಲೆ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ಆಹಾರವಿಲ್ಲದೆ ಪರದಾಡುತ್ತಿರುವ ಜನರಿಗೆ ಶಾಸಕರೊಬ್ಬರು ಆಹಾರಗಳ ಕಿಟ್ ವಿತರಣೆ ಮಾಡಿದ್ದಾರೆ.

ಕೊರೊನಾ ಭೀತಿ ಹಿನ್ನಲೆ ಇಡೀ ದೇಶವೇ ಲಾಕ್ ಡೌನ್ ಮಾಡಿದ ಕಾರಣ ಕೆಲವು ಬಡವರು ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಇದನ್ನು ಮನಗೊಂಡ ರಾಯಚೂರು ಜಿಲ್ಲೆ ಮಾನವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಬಡವರಿಗೆ ಕಿಟ್ ವಿತರಣೆ ಮಾಡಿದ್ದಾರೆ.

 

ಶಾಸಕ ರಾಜಾ ವೆಂಕಟಪ್ಪ ನಾಯಕ ಅಕ್ಕಿ, ಬೇಳೆ ಸೇರಿ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿದ್ದು,  ಕಳೆದ 3 ದಿನಗಳಿಂದ ಆಹಾರ ಕಿಟ್ ವಿತರಿಸುತ್ತಿದ್ದಾರೆ ಎನ್ನಲಾಗಿದೆ.

 
ಇದರಲ್ಲಿ ಇನ್ನಷ್ಟು ಓದಿ :