ಬಡಾವಣೆಗೆ ಚಿರತೆ ನುಗ್ಗಿ ಮೂವರ ಮೇಲೆ ಅಟ್ಯಾಕ್ ಮಾಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರದ ಕನಕಗಿರಿಯಲ್ಲಿ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಹಾಗೂ ಸೈಕಲ್ ಸವಾರರ ಮೇಲೆ ಹಾಗೂ ಅರಣ್ಯ ಸಿಬ್ಬಂದಿಯ ಮೇಲೂ ಚಿರತೆ ದಾಳಿ ಮಾಡಿದೆ. ಇದರಿಂದ ಕೆ.ಆರ್.ನಗರದ ಪಟ್ಟಣದ ಜನರಲ್ಲಿ ಆತಂಕದ ವಾತಾವರಣ ಮನೆಮಾಡಿತ್ತು.