ಬೈಂದೂರು ತಾಲೂಕಿನ ಯಳಜಿತ್ ಗ್ರಾಮದಲ್ಲಿ ನಾಲ್ಕು ದಿನಗಳ ಹಿಂದೆ ಏಳು ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿದ ನೆನಪು ಹಸಿರಾಗಿರುವಾಗಲೇ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮಪಂಚಾಯತ್ ವ್ಯಾಪ್ತಿಲ್ಲಿ ಇನ್ನೆರಡು ಜಾನುವಾರಗಳು ಅಸ್ವಸ್ಥಗೊಂಡಿದ್ದು, ಪಶುವೈದ್ಯಾಧಿಕಾರಿಗಳು ಚಿಕಿತ್ಸೆ ಮುಂದುವರಿಸಿದ್ದಾರೆ.ಕೊರ್ಗಿ ನಿವಾಸಿ ಗುಲಾಬಿ ಬಳೆಗಾರ್ತಿ ಎಂಬವರಿಗೆ ಸೇರಿದ ಒಂದು ಗಬ್ಬದ ದನ ಹಾಗೂ ಒಂದು ಕರು ಅಸ್ವಸ್ಥಗೊಂಡಿದೆ. ಕರುವಿನ ಸ್ಥಿತಿ ಗಂಭೀರವಾಗಿದ್ದು, ದನ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ದನ ತೋಟಕ್ಕೆ ಹೋಗುವ ವಿಚಾರದಲ್ಲಿ ನಿನ್ನೆ ಸಂಜೆ ಗುಲಾಬಿ ಬಳೆಗಾರ್ತಿ