ಕೊರೊನಾ ಕಳೆದ ಮೂರು ವರ್ಷಗಳಿಂದ ರಾಜ್ಯದ ಮನೆ ಮನೆಗಳಲ್ಲಿ ಮನೆಯ ಮಗನಂತೆ ಒಕ್ಕರಿಸಿಕೊಂಡು, ನೂರಾರು ಜನರ ಬದುಕು ಬಿದಿಗೆ ತಂದಿದ್ದಾನೆ. ಇನ್ನೇನು ಕಡಿಮೆ ಆಯ್ತು ಅನ್ನುವಷ್ಟರಲ್ಲಿ ಇದೀಗ ಮತ್ತೆ ಸುಂಟರಗಾಳಿಯಂತೆ ದೇಶಾದ್ಯಂತ ವ್ಯಾಪಿಸಿದ್ದಾನೆ. ಇನ್ನೂ ಜನರು ಮಾತ್ರ ಕೊರೊನಾ ಇಲ್ಲ ಎಂದು ನಿರ್ಲಕ್ಷ ವಹಿಸಿದ್ದು, ಆರೋಗ್ಯ ಇಲಾಖೆ ಮತ್ತೆ ದಂಡ ಅಸ್ತ್ರ ಪ್ರಯೋಗಕೆ ಮುಂದಾಗಿದೆ. ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಕೋವಿಡ್-19 ಪ್ರಕರಣಗಳಲ್ಲಿ ಕೊಂಚ ಏರಿಕೆ ಜೊತೆಗೆ ಜುಲೈ ತಿಂಗಳನಲ್ಲಿ 4 ನೇ ಅಲೆ ಆತಂಕ ಇರುವುದರಿಂದ ಮತ್ತೆ ಫುಲ್ ಅಲರ್ಟ್ ಆಗಿದೆ. ಇತ್ತ ಸಾರ್ವನಿಕರಿಗೆ ಇಷ್ಟೇ ಮನವಿ ಮಾಡಿದ್ರು, ಕೋವಿಡ್ ನಿಯಮ ಪಾಲನೆ ಮಾಡ್ತಿಲ್ಲ. ಹೀಗಾಗಿ ಮತ್ತೆ ಆರೋಗ್ಯ ಇಲಾಖೆ ದಂಡ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.