ಯಾವುದೇ ಕಾರಣಕ್ಕೂ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲ್ಲ ಎಂದು ಕೃಷಿ ಸಚಿವ

ಬೆಂಗಳೂರು| pavithra| Last Updated: ಗುರುವಾರ, 10 ಡಿಸೆಂಬರ್ 2020 (12:05 IST)
ಬೆಂಗಳೂರು : ಯಾವುದೇ ಕಾರಣಕ್ಕೂ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲ್ಲ ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಗೆ ಧರಣಿ ವೇಳೆ ಮಾತ್ರ ಹಸಿರು ಶಾಲು ನೆನಪಾಗುತ್ತೆ. ಅವರು ಹಸಿರು ಶಾಲು ಹಾಕಿಕೊಂಡ ತಕ್ಷಣ ರೈತರಾಗುವುದಿಲ್ಲ. ನಮಗೆ ರೈತರ ಬಗ್ಗೆ ಕಾಳಜಿ ಇದೆ. ಆದ್ರೆ ಅವರು ಟೀಕಿಸುತ್ತಾರೆ. ಕಾಂಗ್ರೆಸ್ ಪಕ್ಷದ ಟೀಕೆಗಳನ್ನು ಜನರು ಒಪ್ಪಿಕೊಳ್ಳುವುದಿಲ್ಲ. ರಾಜ್ಯದ ಜನರು ನಮ್ಮನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗೇ ಪ್ರತಿಭಟನೆ ಹಿಂಪಡೆಯುವಂತೆ ರೈತರಲ್ಲಿ ಮನವಿ ಮಾಡುತ್ತೇನೆ. ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ, ಪ್ರತಿಭಟನೆಕೈಬಿಡಿ. ಸಿಎಂ ಕರೆದಾಗ ರೈತ ಮುಖಂಡರು ಬಂದು ಚರ್ಚೆ ಮಾಡಬೇಕು. ರೈತರಲ್ಲಿ ಯಾರು ದಡ್ಡರಿಲ್ಲ, ಎಲ್ಲರೂ ಬುದ್ಧಿವಂತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :