ಸಾರಿಗೆ ನೌಕರರ ಹಿತರಕ್ಷಣೆಗೆ ಸರ್ಕಾರ ಬದ್ಧ ಎಂದ ಸಾರಿಗೆ ಸಚಿವ

ಬೆಂಗಳೂರು| pavithra| Last Modified ಶುಕ್ರವಾರ, 11 ಡಿಸೆಂಬರ್ 2020 (11:25 IST)
ಬೆಂಗಳೂರು : ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ನೌಕರರ ಜತೆ ಚರ್ಚಿಸಲು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತುರ್ತು ಸಭೆ ಕರೆದಿದ್ದಾರೆ.

ಸಾರಿಗೆ ನೌಕರರು ಪ್ರತಿಭಟನೆ ಕೈಬಿಡಬೇಕು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮನವಿ ಮಾಡಿದ್ದಾರೆ. ಸಾರಿಗೆ ನೌಕರರ ಹಿತರಕ್ಷಣೆಗೆ ಬದ್ಧ. ಸಾರಿಗೆ ನೌಕರರ ಸಮಸ್ಯೆ ಆಲಿಸುತ್ತೇವೆ. ಮುಂದಿನ ದಿನಗಳಲ್ಲಿ ಬೇಡಿಕೆ ಬಗ್ಗೆ ಚರ್ಚೆ. ನಿಮ್ಮ ಬೇಡಿಕೆ ಬಗ್ಗೆ ಕುಳಿತು ಚರ್ಚಿಸೋಣ ಎಂದು  ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಕೊರೊನಾ ಸಂಕಷ್ಟದ ಸಮಯದಲ್ಲಿ ಸಿಬ್ಬಂದಿಗೆ  ವೇತನ ನೀಡಿದ್ದೇವೆ. ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು. ಒಂದು ನಿಗಮದ ಬೇಡಿಕೆ ಈಡೇರಿಸಿದ್ರೆ ಉಳಿದ ನಿಗಮಗಳು ಇದೇ ರೀತಿ ಬೇಡಿಕೆ ಇಡ್ತಾರೆ. ಇದು ಸರ್ಕಾರಕ್ಕೆ ದೊಡ್ಡ ಸವಾಲು ಆಗಲಿದೆ. ಜನರಿಗೆ ತೊಂದರೆ ಮಾಡೋದು ಬೇಡ ಎಂದು ಅವರು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :