ಈ ರಾಜ್ಯದ ಜನರ ಜನತೆಯ ಬೇಡಿಕೆಯಂತೆ ಸಿಕ್ಕಿರುವ ಮಹದಾಯಿ ನೀರು ಬಳಸಿಕೊಳ್ಳಲು ಸಿದ್ಧರಾಗಿದ್ದೇವೆ. ಯಾವುದೇ ಕಾರಣಕ್ಕೂ ನಾವು ಮಹದಾಯಿ ಯೋಜನೆ ಕಾಮಗಾರಿ ವಿಳಂಬ ಮಾಡಲ್ಲ. ಹೀಗಂತ ನೀರಾವರಿ ಸಚಿವ ಹೇಳಿದ್ದಾರೆ.ಬೆಳಗಾಗಿ ಜಿಲ್ಲೆಯ ಕಣಕುಂಬಿ ಪ್ರವಾಸಿ ಮಂದಿರದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಸಚಿವರಿಗೆ ಶಾಸಕಿಯರಾದ ಅಂಜಲಿ ನಿಂಬಾಳ್ಕರ, ಲಕ್ಷ್ಮೀ ಹೆಬ್ಬಾಳಕರ ಮತ್ತು ಅಧಿಕಾರಿಗಳು ಸಾಥ್ ನೀಡಿದರು. ಮಹದಾಯಿ ಹೋರಾಟಕ್ಕೆ ಸ್ಪಂದಿಸಿದ ಮಾಧ್ಯಮದವರು ಮತ್ತು ಎಲ್ಲಾ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ,