ಓಡಾಡಲು ಸಾಧ್ಯವಿಲ್ಲದಂತೆ ಮೈ ಮೇಲೆ ಎರಗುತ್ತಿದ್ದ ಕೋತಿಗಳ ಹಾವಳಿಯಿಂದ ಆ ಊರಿನ ಜನರು ಕೆಲ ದಿನಗಳಿಂದ ನೆಮ್ಮದಿಯನ್ನೇ ಕಳೆದುಕೊಂಡಿದ್ದರು. ಕೊನೆಗೂ ಕೋತಿಗಳ ಹಾವಳಿಗೆ ಬ್ರೇಕ್ ಬಿದ್ದಿದೆ. ಈಗ ಜನರು ಖುಷ್ ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮಂಗಗಳ ಹಾವಳಿಯಿಂದ ತತ್ತರಿಸಿದ್ದ ಜನತೆ ಈಗ ಖುಷ್ ಆಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಬಾಲಕನೊಬ್ಬನನ್ನು ಕಚ್ಚಿ ಗಾಯಗೊಳಿಸಿದ್ದ ಮಂಗ, ಓಡಾಡಲು ಸಾಧ್ಯವಿಲ್ಲದಂತೆ ಜನರನ್ನು ಹೈರಾಣಾಗಿಸಿದ್ದವು. ಕೋತಿಗಳ ಉಪಟಳ ತಾಳಲಾರದೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.ಸಾರ್ವಜನಿಕರಿಂದ