ಬೆಂಗಳೂರು ಮೆಟ್ರೋದ ಬಹುನಿರೀಕ್ಷಿತ ಹಳದಿ ಮಾರ್ಗವು ಈ ವರ್ಷದ ಡಿಸೆಂಬರ್ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ ಎಂದು BMRCL ತಿಳಿಸಿದೆ. ಈ ಮೊದಲು, ಮೆಟ್ರೋ ಪ್ರಾಧಿಕಾರವು ಎರಡು ಹಂತಗಳಲ್ಲಿ ಹಳದಿ ಮಾರ್ಗವನ್ನು ತೆರೆಯಲು ನಿರ್ಧರಿಸಿತ್ತು. ಅಂದರೆ, ಮೊದಲ ಹಂತದಲ್ಲಿ ಇದೇ ಜೂನ್ ತಿಂಗಳಲ್ಲಿ ಬೊಮ್ಮಸಂದ್ರದಿಂದ ಸಿಲ್ಕ್ಬೋರ್ಡ್ವರೆಗೆ ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡನೇ ಹಂತದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಆರ್ವಿ ರಸ್ತೆಯವರೆಗಿನ ಮೆಟ್ರೋ ಕಾರ್ಯಾಚರಣೆ ಆರಂಭಿಸಲು ಉದ್ದೇಶಿಸಿತ್ತು. ಆದರೆ, ಈ ರೀತಿ ಎರಡು