Widgets Magazine

ಹಾಸನಕ್ಕೆ ಶುರುವಾಯಿತು ಮುಂಬೈ ಭಯ : 26 ಜನರಲ್ಲಿ ಕೊರೊನಾ

ಹಾಸನ| Jagadeesh| Last Updated: ಭಾನುವಾರ, 17 ಮೇ 2020 (18:42 IST)
ಹಾಸನ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಒಂದೇ ದಿನ ಆರು ಹೊಸ  ಪ್ರಕರಣಗಳು ಪತ್ತೆಯಾಗಿವೆ.

ಒಟ್ಟು ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

ಸೋಂಕಿತರೆಲ್ಲರೂ ಮಹಾರಾಷ್ಟ್ರದಿಂದ‌ ವಿವಿಧ ದಿನಗಳಲ್ಲಿ ಜಿಲ್ಲೆಗೆ ಪ್ರಯಾಣ ಮಾಡಿದವರಾಗಿದ್ದು, ಅವರೆಲ್ಲರನ್ನೂ ಗಡಿ ಭಾಗದಲ್ಲಿ ಪತ್ತೆ ಮಾಡಿ ಕ್ವಾರಂಟೈನ್ ಮಾಡಲಾಗಿತ್ತು.

ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿ ಮಹಾರಾಷ್ಟ್ರದಿಂದ ಹಾಸನಕ್ಕೆ ಬರುತ್ತಿರುವವರಲ್ಲಿ ಸೋಂಕು ಪತ್ತೆ ಹೆಚ್ಚಾಗಿದೆ ಎಂದರು.


ಇದರಲ್ಲಿ ಇನ್ನಷ್ಟು ಓದಿ :