ತಂಗಿಯ ಜೊತೆ ಫೋನ್ ನಲ್ಲಿ ಮಾತನಾಡಿದ್ದಕ್ಕೆ ನಡೆಯಿತು ಕೊಲೆ

ಬಾಗಲಕೋಟೆ, ಶುಕ್ರವಾರ, 11 ಅಕ್ಟೋಬರ್ 2019 (12:26 IST)

ಬಾಗಲಕೋಟೆ : ತಂಗಿಯ ಜೊತೆ ಫೋನ್ ನಲ್ಲಿ ಮಾತನಾಡಿದ ಕಾರಣಕ್ಕೆ ಆಕೆಯ ಪ್ರಿಯಕರನನ್ನು ಆಕೆಯ ಸಹೋದರ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ.
ನಬಿಸಾಬ್ ತಹಸೀಲ್ದಾರ(22) ಕೊಲೆಯಾದ ಯುವಕ. ವಿಠ್ಠಲ್ ಕೊಲೆ ಮಾಡಿದ ಆರೋಪಿ. ನಬಿಸಾಬ್, ವಿಠ್ಠಲ ಸಹೋದರಿಯನ್ನು ಪ್ರೀತಿಸುತ್ತಿದ್ದು,  ಆಗಾಗ ಫೋನಿನಲ್ಲಿ ಮಾತನಾಡುತ್ತಿದ್ದರು. ಈ ವಿಷಯ ತಿಳಿದ ವಿಠ್ಠಲ, ನಬಿಸಾಬ್‍ ಗೆ ತನ್ನ ಸಹೋದರಿ ಜೊತೆ ಫೋನಿನಲ್ಲಿ ಮಾತನಾಡದಂತೆ ಎಚ್ಚರಿಕೆ ನೀಡಿದ್ದ.


ಆದರೆ ವಿಠ್ಠಲ ಸಹೋದರಿ ಜೊತೆ ನಬಿಸಾಬ್ ಫೋನಿನಲ್ಲಿ ಮಾತು ಮುಂದುವರಿಸಿದ ಕಾರಣ ಕೋಪಗೊಂಡ ವಿಠ್ಠಲ್ ತನ್ನ ಸ್ನೇಹಿತನ ಜೊತೆ ಸೇರಿ ಆತನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸದ್ಯ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪರಮೇಶ್ವರ್ ಶಿಕ್ಷಣ ಸಂಸ್ಥೆಯ ಮೇಲೆ ಐಟಿ ದಾಳಿ ನಡೆಸಲು ಕಾರಣವೇನು ಗೊತ್ತಾ?

ಬೆಂಗಳೂರು : ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ...

news

ಡಾ. ಜಿ ಪರಮೇಶ್ವರ್ ಅವರ ಅಣ್ಣನ ಮಗನನ್ನು ವಿಚಾರಣೆಗೆ ಒಳಪಡಿಸಲಿರುವ ಐಟಿ

ಬೆಂಗಳೂರು : ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ...

news

ಅಧಿವೇಶನದಲ್ಲಿ ಸುದ್ದಿ ಮಾಧ್ಯಮಗಳ ಕ್ಯಾಮೆರಾ ನಿಷೇಧ; ಪ್ರೆಸ್ ಕ್ಲಬ್ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ

ಬೆಂಗಳೂರು : ಅಧಿವೇಶನದಲ್ಲಿ ಸುದ್ದಿ ಮಾಧ್ಯಮಗಳ ಕ್ಯಾಮರಾ ನಿಷೇಧ ವಿಚಾರದ ಕುರಿತು ಪ್ರೆಸ್ ಕ್ಲಬ್ ಆಫ್ ...

news

ಮೂತ್ರ ವಿಸರ್ಜನೆಗೆಂದು ರೈಲ್ವೆ ನಿಲ್ದಾಣದ ಬಳಿ ಬಂದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ಭೋಪಾಲ್ : ಮೂತ್ರ ವಿಸರ್ಜನೆಗೆಂದು ರೈಲ್ವೆ ನಿಲ್ದಾಣದ ಬಳಿ ಹೋದ 20 ವರ್ಷದ ವಿವಾಹಿತೆ ಮೇಲೆ ನಾಲ್ವರು ...