ಎಲೆಕ್ಷನ್ ಮರುದಿನವೇ ನಡೆಯಿತು ಯುವಕನ ಭಯಾನಕ ಕೊಲೆ

ಕಲಬುರಗಿ, ಗುರುವಾರ, 25 ಏಪ್ರಿಲ್ 2019 (11:51 IST)

ಮತದಾನ ಮುಗಿದ ಮರುದಿನವೇ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಮಾರಕಾಸ್ತ್ರಗಳಿಂದ ಹೊಡೆದು ಯುವಕನ ಬರ್ಬರ ಕೊಲೆ ಮಾಡಲಾಗಿದೆ.

ಕಲಬುರಗಿ ನಗರದ ಹೊರವಲಯದ ಹಾಗರಗಾ ರೋಡ್ ಬಳಿ ಘಟನೆ ನಡೆದಿದೆ. ಕಳೆದ ರಾತ್ರಿ ಬರ್ಬರ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪಯಾಜ್ ಶೇಕ್ 25 ಕೊಲೆಯಾದ ದುರ್ದೈವಿ. ಈತ ಕಲಬುರಗಿ ನಗರದ ಖಾಜಾ ಕಾಲೋನಿ ನಿವಾಸಿಯಾಗಿದ್ದನು.

ಇನ್ನಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಮ್ರಾನ್ ಮತ್ತು ಯಾಕೂಬ್ ಗಾಯಾಳುಗಳಾಗಿದ್ದಾರೆ.

ಪೀರ್ ಬಂಗಾಲ ದರ್ಗಾದಿಂದ ಮೂವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಅಬು ಮೌಲಾನ್ ಬ್ರದರ್ಸ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಲೆಕ್ಷನ್ ಬಳಿಕ ಬೆಳಗಾವಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಬೆಳಗಾವಿಗೆ ಭೇಟಿ ನೀಡಿದ್ದಾರೆ. ಕೆ.ಎಲ್.ಇ ವಿಶ್ವವಿದ್ಯಾಲಯದ 9 ನೇ ...

news

ನರೇಗಾ ಕೆಲಸಕ್ಕೆ ಹೊರಟವರು ಹೆಣವಾಗಿದ್ದು ಹೇಗೆ?

ನರೇಗಾ ಕೆಲಸಕ್ಕೆಂದು ಜನರು ಎಂದಿನಂತೆ ಹೊರಡುವಾಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡ ...

news

ಬಿಜೆಪಿ ಕೋರ್ ಕಮಿಟಿ ಸಭೆ ಶುರು: ಬೈ ಎಲೆಕ್ಷನ್ ಅಭ್ಯರ್ಥಿ ಫೈನಲ್

ಬಿಜೆಪಿ ಕೋರ್ ಕಮಿಟಿ ಸಭೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಆರಂಭಗೊಂಡಿದೆ.

news

ಎನ್ ಡಿ ತಿವಾರಿ ಪುತ್ರನ ಕೊಲೆ ಪ್ರಕರಣ: ಪತ್ನಿಯೇ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ್ದು ಹೇಗೆ ಗೊತ್ತಾ?!

ನವದೆಹಲಿ: ರಾಜಕಾರಣಿ ಎನ್ ಡಿ ತಿವಾರಿ ಪುತ್ರ ರೋಹಿತ್ ಶೇಖರ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ...