ಜಾತಿ, ಧರ್ಮದ ಆಧಾರದಲ್ಲಿ ಕೆಲ ಸಮುದಾಯದ ಹೆಸರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಪಷ್ಟನೆ ನೀಡಿದ್ದಾರೆ. ನಿರ್ದಿಷ್ಟ ಸಮುದಾಯಗಳ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂಬ ವರದಿ ಸುಳ್ಳು. ಮತದಾರರ ಪಟ್ಟಿ ಯಾರೊಬ್ಬರ ಜಾತಿ, ಧರ್ಮದ ಮಾಹಿತಿಯನ್ನು ಹೊಂದಿಲ್ಲ. ನಿಧನರಾದ ಸ್ಥಳಾಂತರಗೊಂಡವರ ಹೆಸರುಗಳನ್ನು ನಿಯಮದಂತೆ ಡಿಲೀಟ್ ಮಾಡಲಾಗಿದೆ. ಒಂದೇ ವ್ಯಕ್ತಿಗೆ ಅನೇಕ ಹೆಸರಿರುವ ಸಾಧ್ಯತೆಯ