ಈ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಕ್ಕೆ ಏರಿಕೆ

ಬೆಳಗಾವಿ| Jagadeesh| Last Modified ಗುರುವಾರ, 9 ಏಪ್ರಿಲ್ 2020 (20:15 IST)
ಮತ್ತೆ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆ ಮೂಲಕ ಜಿಲ್ಲೆಯಲ್ಲಿ ವೈರಸ್ ಪೀಡಿತರ ಸಂಖ್ಯೆ 10ಕ್ಕೆ ಏರಿಕೆಯಾದಂತಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಮೂರು ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಸ್ಪಷ್ಟಪಡಿಸಿದೆ. 50 ವರ್ಷದ ವ್ಯಕ್ತಿ (ಪಿ-182), 40 ವರ್ಷದ ಮಹಿಳೆ(ಪಿ-192) ಹಾಗೂ 22 ವರ್ಷದ ಯುವಕ(ಪಿ-193)ನಲ್ಲಿ ಸೋಂಕು ಪತ್ತೆಯಾಗಿದೆ.> > ಈ ಮೂವರೂ ಈಗಾಗಲೇ ಸೋಂಕಿತರಾಗಿರುವ 20 ವರ್ಷದ ಪಿ-128 ಇವರ ಕುಟುಂಬದ ಸದಸ್ಯರಾಗಿದ್ದಾರೆ. ಸೋಂಕಿತ ಯುವಕ ಪಿ-128 ಇವರ ತಂದೆ, ತಾಯಿ ಮತ್ತು ಸಹೋದರನಿಗೆ ಕೂಡ ಸೋಂಕು ದೃಢಪಟ್ಟಿರುವುದು ಆರೋಗ್ಯ ಇಲಾಖೆ ತಿಳಿಸಿದೆ.

ಇದರಲ್ಲಿ ಇನ್ನಷ್ಟು ಓದಿ :