ಅಡಿಕೆ ಕದಿಯಲು ಬಂದವರನ್ನು ಹಿಡಿದ ಸಾರ್ವಜನಿಕರು ಕಂಬಕ್ಕೆ ಕಟ್ಟಿ ಹೊಡೆದಿರುವ ಘಟನೆ ನಡೆದಿದೆ.ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೂವರು ಯುವಕರನ್ನು ಅಡಿಕೆ ಕಳ್ಳತನ ಮಾಡುತ್ತಿದ್ದರೆಂಬ ಆರೋಪದ ಮೇಲೆ ಸಾರ್ವಜನಿಕರೇ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಚಿಕ್ಕನಾಯಕನಹಳ್ಳಿಯ ಕುಮಾರ್ ಎಂಬುವವರ ಮನೆಯಲ್ಲಿ ಅಡಿಕೆ ಕದಿಯಲು ಮೂವರು ಯುವಕರು ಬಂದಿದ್ದರು.ಈ ಮೂವರ ಪೈಕಿ ಓಬ್ಬನನ್ನು ಸಾರ್ವಜನಿಕರು ಹಿಡಿದರು. ಪರಾರಿಯಾಗಿದ್ದ ಇನ್ನಿಬ್ಬರನ್ನು ಸಿಕ್ಕಿಬಿದ್ದಿದ್ದ ಕಳ್ಳನ ಮೂಲಕ ಮಾಹಿತಿ ಪಡೆದು ಸೆರೆಹಿಡಿದರು. ಅವರನ್ನೂ