ಅಪ್ಘಾನಿಸ್ಥಾನ ವಶಕ್ಕೆ ಪಡೆದ ತಾಲಿಬಾನ್ ಒಂದೊಂದೇ ನಿರ್ಬಂಧ ಹೇರುತ್ತಿದೆ. ಸರ್ಕಾರ ರಚನೆ ಇನ್ನೂ ಆಗಲೇ ಇಲ್ಲ. ಅದಕ್ಕಿಂತ ಮುಂಚಿತವಾಗಿಯೇ ಖಾತೆ ಹಂಚಿಕೆ ಮಾಡಿಕೊಂಡ ತಾಲಿಬಾನಿಗಳು ಅಫ್ಘಾನ್ನಲ್ಲಿ ಮಹಿಳೆಯರ ಮೇಲೆ ನಿರ್ಬಂಧ ಹೇರುತ್ತಿದೆ. ಅಫ್ಘನ್ ನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಅಬ್ದುಲ್ ಬಾರ್ಕಿ ಹಕ್ಕಾನಿ, ಪಿಜಿ ಮಾಡುವ ಮಹಿಳೆಯರು ಪದವಿಗಳೊನ್ನಗೊಂಡಂತೆ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಬಹುದು. ಆದ್ರೆ ಪುರುಷರಿರುವ ಕೋಣೆಗಳಲ್ಲಿ ಮಹಿಳಾ ವಿದ್ಯಾರ್ಥಿಗಳು ಕೂರುವಂತಿಲ್ಲ. ಪ್ರತ್ಯೇಕ ಕೊಣೆಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಪದವಿ ಮಾಡಬಹುದು.