ರಾಜ್ಯ ಸರಕಾರ ಲಾಕ್ ಡೌನ್ ಸಡಿಲಿಕೆ ಮಾಡಿರುವುದರಿಂದ ಈ ಟೈಮ್ ನಲ್ಲಿ ಮಾತ್ರ ಅಂಗಡಿಗಳು ಓಪನ್ ಆಗಿರಬೇಕು. ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7 ರಿಂದ 11 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.ಲಾಕ್ ಡೌನ್ ಸಡಿಲ ಮಾಡಿರುವುದು ಆರ್ಥಿಕ ಪುನಶ್ಚೇತನಕ್ಕಾಗಿ. ಹಾಗಾಗಿ ಅದು ಸಡಿಲಿಕೆ ಆಗಿದೆ ಎಂದು ಸ್ವೇಚ್ಛಾಚಾರ ಮಾಡಬೇಡಿ. ಮೇ 3 ರವರೆಗೆ ಕಾನೂನು ಪಾಲನೆ ಮಾಡುತ್ತಾ ಜಿಲ್ಲಾಡಳಿತದ ಜೊತೆ ಸಹಕರಿಸಿ