ಬೆಂಗಳೂರು : ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಜನರ ಬಳಿ ಮತ ಕೇಳುತ್ತದೆ. ಬಿಜೆಪಿ ದ್ವೇಷದ ಭಾವನೆ ಮೂಡಿಸಿ ಮತ ಕೇಳುತ್ತದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. ಚಾಮರಾಜಪೇಟೆ ಕಸ್ತೂರಿ ನಗರದ ಬಿಬಿಎಂಪಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ್ದು ಅಭಿವೃದ್ಧಿ ಮಂತ್ರ, ಬಿಜೆಪಿ ಅವರದು ದ್ವೇಷದ ತಂತ್ರ ಎಂದು ಹೇಳಿದರು. ಕಾಂಗ್ರೆಸ್