ತಿಪ್ಪರಲಾಗ ಹಾಕಿದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರೋಲ್ಲ. ಬಿಜೆಪಿ ಮಾಡಿದ ಅನಾಹುತಗಳನ್ನು ಜನತೆ ಮರೆತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಮುಂದಿನ ದಸರಾ ವೇಳೆಗೆ ಯಡಿಯೂರಪ್ಪ ಸಿಎಂ ಎನ್ನುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಮಿಷನ್ 150 ಎನ್ನುವ ಭ್ರಮೆಯಲ್ಲಿದ್ದಾರೆ ಮಿಷನ್ 150 ಅನ್ನುವುದು ಭ್ರಮೆ. ಬಿಜೆಪಿ ನಾಯಕರು ಕೇವಲ ಭ್ರಮೆಯ ಅಲೆಯಲ್ಲಿ ತೇಲುತ್ತಿದ್ದಾರೆ. ಕೇಂದ್ರದ ನೀತಿಯಿಂದಾಗಿ ದೇಶದ ಜಿಡಿಪಿ ಕುಸಿದಿದೆ.