ಮಂಗಳೂರು : ಇಂಧನ ಸಚಿವ ಸುನಿಲ್ ಕುಮಾರ್ ಉಸ್ತುವಾರಿಯಾಗಿರುವ ಜಿಲ್ಲೆಯ ಮೀನುಗಾರಿಕಾ ಸಚಿವರಾಗಿರುವ ಎಸ್.ಅಂಗಾರ ಅವರ ಕ್ಷೇತ್ರ ಸುಳ್ಯದ ವಿದ್ಯುತ್ ಸಮಸ್ಯೆ ನಿರಂತರ ಎರಡನೇ ದಿನವೂ ಮುಂದುವರಿದಿದೆ.ಶನಿವಾರ ದಿನಪೂರ್ತಿ ವಿದ್ಯುತ್ ಇಲ್ಲದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಶನಿವಾರ ದಿನಪೂರ್ತಿ ವಿದ್ಯುತ್ ನಾಪತ್ತೆಯಾಗಿತ್ತು. ರಾತ್ರಿಯೂ ವಿದ್ಯುತ್ ಇಲ್ಲದೆ ಜನರು ಕತ್ತಲಲ್ಲಿ ಕಳೆಯುವಂತಾಗಿದೆ. ರಾತ್ರಿ ಒಂಭತ್ತು ಗಂಟೆಯಾದರೂ ವಿದ್ಯುತ್ ಸಂಪರ್ಕ ಸರಿಪಡಿಸಲಾಗಿಲ್ಲ. ಆನೆಗುಂಡಿಯಲ್ಲಿ ಮರ ಮುರಿದು ಬಿದ್ದ ಕಾರಣ ಮೈನ್ ಲೈನ್ ವಿದ್ಯುತ್