ಬೆಲೆ ಏರಿಕೆ ಬಿಸಿಯಿಂದ ಸಾಮಾನ್ಯ ಜನರು ಜೀವನ ಮಾಡೋದೇ ಕಷ್ಟವಾಗಿದೆ. ದಿನಕ್ಕೊಂದು ರೇಟ್ ಹೆಚ್ಚಳದ ಬಿಸಿ, ಜನಸಾಮಾನ್ಯರ ಜೀವನ ಬರ್ಬಾದ್ ಮಾಡಿದೆ. ಈಗಷ್ಟೆ ಕರೆಂಟ್ ರೇಟ್ ಹೆಚ್ಚಳದಿಂದ ಚೇತರಿಸಿಕೊಳ್ತಿರೋ ಜನರಿಗೆ ಈಗ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಜಸ್ಟ್ ಎರಡು ತಿಂಗಳಲ್ಲಿ ಎರಡೆರೆಡು ಸಲ ಬೇಳೆಕಾಳುಗಳ ಬೆಲೆ ಏರಿಕೆ ಆಗಿದೆ. ಪ್ರತಿ ಕೆಜಿ ಬೇಳೆಕಾಳುಗಳ ಬೆಲೆ ಸರಾಸರಿ 10 ರಿಂದ 20 ರೂವರೆಗೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ