ಜನೌಷಧಿ ಗುಣಮಟ್ಟದಿಂದ ಕೂಡಿಲ್ಲ ಅಂತ ಕೆಲವರು ವದಂತಿಗಳನ್ನು ಹರಡಿಸುತ್ತಿವುದರ ವಿರುದ್ಧ ಬಿಜೆಪಿ ಸಂಸದ ಕಿಡಿಕಾರಿದ್ದಾರೆ. ಜನೌಷಧಿ ಮಾತ್ರೆಗಳು ಗುಣಮಟ್ಟದಿಂದ ಕೂಡಿದೆ. ಕೆಲವರು ಅನಾವಶ್ಯಕವಾಗಿ ಕಡಿಮೆ ದರದ ಜನೌಷಧಿ ಮಾತ್ರೆಗಳು ಗುಣಮಟ್ಟವಿಲ್ಲವೆಂದು ಜನರನ್ನು ತಪ್ಪು ದಾರಿಗೆ ಎಳೆಯಲು ಬಯಸುತ್ತಿದ್ದಾರೆ. ಇದ್ಯಾವುದಕ್ಕೂ ಕಿವಿಗೊಡಬೇಡಿ ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.ಜನೌಷಧಿ ಮಾತ್ರೆಗಳು ಜಿ.ಎಂ.ಪಿ. ದೃಢೀಕೃತ ಮಾತ್ರೆಗಳಾಗಿದ್ದು, ಶೇ.100ರಷ್ಟು ಗುಣಮಟ್ಟದಿಂದ ಕೂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಕೇಂದ್ರ ಸರ್ಕಾರದ ಪೋಷಣ ಅಭಿಯಾನ ಮತ್ತು ಜನೌಷಧಿ ದಿವಸ್