ಹಳೆ ಮದ್ರಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ರಾಪಿಡ್ ರೋಡ್ ಬಿರುಕುಬಿಟ್ಟಿದ್ದು ಇದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದಾರೆ.ಕೋಟಿ ವೆಚ್ಚದಲ್ಲಿ ಶರವೇಗದಲ್ಲಿ ನಿರ್ಮಾಣ ಆದ ರಸ್ತೆ ಮಿಂಚಿನ ವೇಗದಲ್ಲಿ ದುರಸ್ತಿಗೆ ಒಳಗಾಗಿದೆ. ಹೊಸ ತಂತ್ರಜ್ಞಾನದ ನೆಪದಲ್ಲಿ ಕಳಪೆ ಕಾಮಗಾರಿ ಆಗಿದ್ಯಾ ಅನ್ನುವ ಶಂಕೆ ವ್ಯಕ್ತವಾಗಿದೆ.ದೇಶದ ಪ್ರಥಮ ರಾಪಿಡ್ ರಸ್ತೆ ಅಂತ ಬಿಬಿಎಂಪಿ ಬಿಂಬಿಸಿತ್ತು.ಆದ್ರೆ ಈಗ ರಸ್ತೆಯಲ್ಲಿ ಬಿರುಕುಬಿದ್ದಿದೆ.ರಸ್ತೆ ರೆಡಿಯಾಗಿದ್ದೂ ಬೇಗವಾದ್ರು ಸಿಎಂ ಉದ್ಘಾಟನೆಗೆ ಒಂದಷ್ಟು ದಿನ ಕಾಯಬೇಕಾದ ಪರಿಸ್ಥಿತಿಯಿತ್ತು