ರಾಜ್ಯ ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸುತ್ತಿರುವುದರ ವಿರುದ್ಧ ದಂಗೆ ಏಳಬೇಕು ಎಂದಿರುವುದು ಪ್ರತಿಭಟನೆ ಎಂದರ್ಥದಲ್ಲಿ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಸಿ ಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಜೆಡಿಎಸ್ ನ ಯಾವ ಶಾಸಕರು ಬಿಜೆಪಿಯವರ ಸಂಪರ್ಕದಲ್ಲಿ ಇಲ್ಲ ಎಂದರು. ಬಾಂಬೆಗೆ ಹೋಗಿದ್ದಾರೆಂದು ಹೇಳುತ್ತಿರುವ ಶಾಸಕರು ನಮ್ಮೊಂದಿಗೆ ಇದ್ದಾರೆ. ಅವರಲ್ಲೂ ಹೋಗಿಲ್ಲ ಎಂದರು. ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು ಸಂತೋಷದ ವಿಷಯ ಎಂದ ಅವರು, ರಾಜ್ಯಪಾಲರಿಗೆ ಈ ಬಗ್ಗೆ ಮಾಹಿತಿ