ರಸ್ತೆ ಗುಂಡಿ ಮುಚ್ಚಲಾಗದೇ ರಾಜ್ಯ ರಾಜಧಾನಿ ಬೆಂಗಳೂರಿನ ಅಂದ ಹಾಳುಮಾಡಿದ್ದ ಪಾಲಿಕೆಗೆ ಇದೀಗ ಹೈಕೋರ್ಟ್ ಬಿಸಿಮುಟ್ಟಿಸಿದೆ. ಕಾದ ಸಮಯದಲ್ಲೇ ಕಬ್ಬಿಣ ಬಡಿಯಬೇಕು ಎನ್ನುವಂತೆ ಹೈಕೋರ್ಟ್ ಬೀಸಿದ ಚಾಟಿಗೆ ಪಾಲಿಕೆ ಕಂಗಾಲಾಗಿಬಿಟ್ಟಿದೆ. ಹೌದು, ಈ ಹಿಂದೆ ಹಲವು ಬಾರಿ ರಸ್ತೆಗುಂಡಿ ಮುಚ್ಚುವ ವಿಚಾರಕ್ಕೆ ನಿರ್ಲಕ್ಷ್ಯ ತೋರಿ ಛೀಮಾರಿ ಹಾಕಿಸಿಕೊಂಡಿದ್ದ ಪಾಲಿಕೆ, ಮತ್ತೆ ಮುಜುಗರಕ್ಕೆ ಒಳಗಾಗಿದೆ. ಮೊನ್ನೆಯಷ್ಟೇ ಇದೇ ವಿಚಾರಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತೆ ಪಾಲಿಕೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ತಾಳ್ಮೆ