ದನಗಳ ಜತೆ ತೆರಳಿದಾಗ ನಡೆಯಬಾರದ ಘಟನೆ ನಡೆದುಹೋಗಿದೆ.ಮಂಡ್ಯ ಜಿಲ್ಲೆಯ ದೊಡ್ಡಗಾಡಿಗನಹಳ್ಳಿ ಗ್ರಾಮದ ತನ್ನ ಜಮೀನಿನ ಬಳಿ ಉಳುಮೆ ಮಾಡಿ ನಂತರ ದನಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದ ಯುವರೈತನೊಬ್ಬ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ದೊಡ್ಡಗಾಡಿಗನಹಳ್ಳಿ ಗ್ರಾಮದ ರಂಗೇಗೌಡರ ಮಗ ಡಿ.ಆರ್.ಕಾರ್ತಿಕ್(23) ಮೃತ ಯುವ ರೈತನಾಗಿದ್ದಾನೆ.ಕಾರ್ತೀಕ್ ಬೆಳಿಗ್ಗೆ 6 ಗಂಟೆಗೆ ತಮ್ಮ ದನಗಳೊಂದಿಗೆ ಜಮೀನನ್ನು ಉಳುಮೆ ಮಾಡಲು ಹೋಗಿದ್ದಾನೆ. ಉಳುಮೆಯ ನಂತರ ದನಗಳಿಗೆ ನೀರು ಕುಡಿಸಿ ಮೈತೊಳೆಯುತ್ತಿರುವಾಗ