ಕಲಬುರಗಿ : ಇಂದು ಮಹಾಶಿವರಾತ್ರಿಯ ಪ್ರಯುಕ್ತ ಕಲಬುರಗಿಯಲ್ಲಿ ಅಲ್ಲಿನ ಪ್ರಮುಖ ಬೆಳೆಯಾದ ತೊಗರಿಯಲ್ಲಿ ಶಿವಲಿಂಗವನ್ನು ಶೃಂಗರಿಸಿ ಪ್ರತಿಷ್ಠಾಪಿಸಲಾಗಿದೆ. ಒಟ್ಟು 25 ಅಡಿ ಎತ್ತರದಲ್ಲಿ ಶಿವಲಿಂಗವನ್ನು ನಿರ್ಮಿಸಲಾಗಿದ್ದು, ಇದಕ್ಕೆ 3 ಕ್ವಿಂಟಾಲ್ ತೊಗರಿಯನ್ನು ಬಳಸಲಾಗಿದೆ ಎನ್ನಲಾಗಿದೆ. ಈ ಶಿವನ ದರ್ಶನ ಪಡೆದು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಕಲಬುರಗಿಯಲ್ಲಿ ಹೆಚ್ಚಾಗಿ ತೊಗರಿ ಬೆಳೆ ಬೆಳೆಯಲಾಗುತ್ತಿದ್ದು, ಇದೀಗ ಮಹಾಶಿವರಾತ್ರಿಯ ಈ ಶುಭದಿನದಂದು ತೊಗರಿಯಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಶಿವನ ಕೃಪೆಗೆ ಮಾತ್ರವಲ್ಲ