ರಾಯಚೂರು : ಪತ್ನಿ ತಂದೆಯ ನಿವೃತ್ತಿ ಹಣಕ್ಕಾಗಿ ಕಿರುಕುಳ ಮಾಡಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಅಂದ್ರೂನ್ಕಿಲ್ಲಾದಲ್ಲಿ ನಡೆದಿದೆ. ಆಸ್ಮಾ ಬಾನು ( 30) ಸಾವನ್ನಪ್ಪಿರುವ ಮಹಿಳೆ. ಪತಿ ಫಸಲುದ್ದೀನ್ ಹಾಗೂ ಮನೆಯವರು ಹಣಕ್ಕಾಗಿ ಕಿರುಕುಳ ನೀಡಿ ಕೊಲೆ ಮಾಡಿರುವ ಬಗ್ಗೆ ಆರೋಪಿಸಲಾಗಿದೆ. ಮೃತಳ ತಾಯಿ ಹಾಗೂ ಸಂಬಂಧಿಕರು ಗಂಡನ ಮನೆಯವರ ವಿರುದ್ದ ಆರೋಪಿಸಿದ್ದಾರೆ. ಹಣಕ್ಕಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಕೊಲೆ