ಭಾರತ ಬಂದ್ ವೇಳೆ ಅಂಗಡಿ ಮುಚ್ಚದ ವ್ಯಾಪಾರಿ ಮೇಲೆ ಹಲ್ಲೆ

ಕುಂದಾಪುರ| Jagadeesh| Last Modified ಶನಿವಾರ, 15 ಸೆಪ್ಟಂಬರ್ 2018 (14:05 IST)
ಭಾರತ ಬಂದ್ ಗೆ ಕರೆ ನೀಡಿದ್ದ ದಿನ ವ್ಯಾಪಾರ ಬಂದ್ ಮಾಡಿಲ್ಲ, ಅಂಗಡಿ ಮುಚ್ಚಿಲ್ಲ ಎನ್ನುವ ಕಾರಣಕ್ಕೆ ಉದ್ಯಮಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಉದ್ಯಮಿ ಹಾಗೂ ಬಿಜೆಪಿಯ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ಘಟನೆ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿ ಕೃಷ್ಣಮೂರ್ತಿ ಕೊಠಾರಿ ಸದ್ಯ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾರತ್ ಬಂದ್ ವೇಳೆ ಅಂಗಡಿ ಮುಚ್ಚದಿರುವುದೇ ಹಲ್ಲೆಗೆ ಕಾರಣ
ಎನ್ನಲಾಗಿದೆ. ಈ ಕುರಿತು ಸ್ಥಳೀಯ ರಾಜಕೀಯ ಮುಖಂಡರ ಮೇಲೆ ಆರೋಪ ಕೇಳಿಬಂದಿದೆ. ಬಂದ್ ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿದ ಆರೋಪ ಕೇಳಿಬರುತ್ತಿದೆ.

ಸುದೀಪ್ ಶೆಟ್ಟಿ, ಸಂತೋಷ್ ಯಾನೆ ಸಂತು, ಶಶಿ, ಗಿರೀಶ್, ಹರೀಶ್, ಸಂದೇಶ್ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಮಾರಕಾಸ್ತ್ರ ಹಿಡಿದು ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬಳಿಕ ಹಲ್ಲೆ ನಡೆಸಿದ ವೇಳೆ ಒಂದು ಲಕ್ಷ ಮೌಲ್ಯದ ಚಿನ್ನದ ಸರ, ಹಣ ದರೋಡೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಬ್ರಹ್ಮಾವರ ಸಿಪಿಐ ಭೇಟಿ ನೀಡಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :