ಮಾಜಿ ಪ್ರಧಾನಿ ದೇವೇಗೌಡರ ತವರು ಜಿಲ್ಲೆಯಲ್ಲಿಯೇ ಅನಿಷ್ಟ ಪದ್ದತಿ ಈಗಲೂ ನೆಲೆಯೂರಿದೆ.ಸಕಲೇಶಪುರ ತಾಲ್ಲೂಕಿನಲ್ಲಿ ಸುಮಾರು 24 ಜೀತಗಾರರನ್ನು ರಕ್ಷಣೆ ಮಾಡಲಾಗಿದೆ. ಇಟ್ಟಿಗೆಗೂಡಿನ ಕೆಲಸಕ್ಕೆ ಬಂದಿದ್ದ ಕಾರ್ಮಿಕರಿಗೆ ಮಾಲೀಕನಿಂದ ಗೃಹಬಂಧನ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಸಕಲೇಶಪುರ ತಾಲ್ಲೂಕಿನ ಮಲಗಳ್ಳಿ ಇಟ್ಟಿಗೆ ಭಟ್ಟಿಯಲ್ಲಿ ಜೀತದಾಳಂತೆ ದುಡಿಯುತ್ತಿದ್ದ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.ತಮಿಳುನಾಡಿನ ಕೃಷ್ಣ ಗಿರಿ ಮೂಲದ ಕಾರ್ಮಿಕರು ರಕ್ಷಣೆಗೆ ಒಳಗಾಗಿದ್ದಾರೆ. ಜೀತ ಕಾರ್ಮಿಕರ ಪೈಕಿ ಐವರು ಮಹಿಳೆಯರು, ನಾಲ್ವರು ಮಕ್ಕಳು ಇದ್ದರು. ಕಡಿಮೆ