ಬೆಂಗಳೂರು-ತಾಯಿಯನ್ನ ಕೊಂದು ಠಾಣೆಗೆ ಬಂದು ಮಗ ಶರಣಾಗಿರುವ ಘಟನೆ ಕೆ ಆರ್ ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಾಯಿ ನೇತ್ರಾಳನ್ನ ರಾಡ್ ನಿಂದ ಮಗ ಪವನ್ ಕೊಲೆ ಮಾಡಿರುವ ಘಟನೆ ಬೆಳಗ್ಗೆ 7.15ರ ಸುಮಾರಿಗೆ ನಡೆದಿದೆ.ಖಾಸಗಿ ಕಾಲೇಜ್ ನಲ್ಲಿ ಡಿಪ್ಲೋಮಾ ಪವನ್ ಓದ್ತಿದ್ದ.ಬೆಳಗ್ಗೆ ಕಾಲೇಜಿಗೆ ರೆಡಿ ಆಗೋವಾಗ ತಾಯಿಗೆ ಊಟ ಬಡಿಸಲು ಹೇಳಿದ್ದಾನೆ.ಈ ವೇಳೆ ಮಗನಿಗೆ ತಾಯಿ ನೇತ್ರಾ ಬೈದಿದ್ರು.ನೀನು ನನ್ನ ಮಗನೇ ಅಲ್ಲ.. ನಿನಗೆ ಊಟ ಹಾಕಲ್ಲ ಎಂದು ತಾಯಿ ಬೈದಿದ್ದಳು.ಅಷ್ಟಕ್ಕೇ ಕೋಪಗೊಂಡು ತಾಯಿಯ ತಲೆಗೆ ರಾಡ್ ನಿಂದ ಪವನ್ ಹೊಡೆದಿದ್ದಾನೆ.