ರಾಜ್ಯದ ಈ ಜಿಲ್ಲೆಯ ಪ್ರದೇಶದಲ್ಲಿ ದಾಖಲೆಯಾಗಿದೆ ಎಂದು ಸ್ಪೀಕರ್ ಹೇಳಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 65,800 ಮಾನವ ದಿನಗಳ ಕೆಲಸವಾಗಿದೆ. 1 ಕೋಟಿ 72 ಲಕ್ಷ ರೂ. ಖರ್ಚಾಗಿದೆ. ಇದು ಜಿಲ್ಲೆಯಲ್ಲಿಯೇ ದಾಖಲೆಯಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಸಿದ್ದಾಪುರದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.ಈ ಯೋಜನೆಯಲ್ಲಿ ಇನ್ನು ಒಂಭತ್ತು ತಿಂಗಳು ಕೆಲಸ ಸಿಗಲಿದ್ದು, ಇನ್ನಷ್ಟು ಅಭಿವೃದ್ಧಿಯಾಗಲಿದೆ.