ಮಾಜಿ ಸಿಎಂ ಸಿದ್ದರಾಮಯ್ಯನವರು ಏನು ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ. ಆದರೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ ರಾಜ್ಯ ಸರಕಾರ ಐದು ವರ್ಷ ಪೂರ್ಣ ಆಡಳಿತ ನಡೆಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿಕೆ ನೀಡಿದ್ದಾರೆ.ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮೈತ್ರಿ ಸರಕಾರ ರಚನೆ ವೇಳೆ ಐದು ವರ್ಷಗಳ ಒಪ್ಪಂದ ಆಗಿದೆ. ನೀವು ತಿರುಗಿಸಿ ಅದನ್ನೇ ಕೇಳಿದರೆ ನಾನು ಅದನ್ನೇ ಹೇಳ್ತಿನಿ ಎಂದು ಪತ್ರಕರ್ತರ ಮೇಲೆ ಪರಮೇಶ್ವರ ಗರಂ ಆದರು. ರಾಜಕಾರಣದಲ್ಲಿ