ಮೈಸೂರು : ಹಾಲ್ ಟಿಕೆಟ್ ಸಿಗದೇ ಇದ್ದದ್ದಕ್ಕೆ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೈಸೂರಿನ ಜಯಲಕ್ಷ್ಮಿ ಪುರಂನಲ್ಲಿ ನಡೆದಿದೆ.ಆತ್ಮಹತ್ಯೆಗೆ ಯತ್ನಿಸುವುದಕ್ಕೂ ಮುನ್ನ ವೀಡಿಯೋ ಮಾಡಿರುವ ತನ್ಮಯಾ ತನ್ನ ಸಾವಿಗೆ ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳೇ ಕಾರಣ ಎಂದು ಆರೋಪಿಸಿದ್ದಾಳೆ. ನನಗೆ ಕಾಲೇಜಿನಲ್ಲಿ ತುಂಬಾ ತೊಂದರೆಯಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ತುಂಬಾ ತಾರತಮ್ಯ ನಡೆಯುತ್ತಿದೆ. ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ತರಗತಿಗಳಿಗೆ ಹಾಜರಾಗಿದ್ದರೂ ಹಾಜರಾತಿ ನೀಡುತ್ತಿಲ್ಲ.ದುಡ್ಡು ತೆಗೆದುಕೊಂಡು ಹಾಲ್ ಟಿಕೆಟ್ ಕೊಡುತ್ತಾರೆ. ಹಣ