ರಾಜ್ಯದಲ್ಲಿ ಓಮಿಕ್ರೋನ್ ವೈರಸ್ ಆತಂಕ ಹೆಚ್ಚಾಗಿದ್ದು , ನಗರದ ಕಾಲೇಜುಗಳಲ್ಲಿ ಸೋಂಕು ಉಲ್ಬಣಿಸಿದೆ. ಹೀಗಾಗಿ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದು, ಪಿಯು ಪರೀಕ್ಷೆಗಳನ್ನ ಮುಂದೂಡುವಂತೆ ಪಟ್ಟು ಹಿಡಿದಿದ್ದಾರೆ. ನಗರದ ಆರ್ ವಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜ್ ಸೇರಿದಂತೆ ಬಹುತೇಕ ಕಾಲೇಜುಗಳ ವಿದ್ಯಾರ್ಥಿಗಳು ಪಿಯು ಬೋರ್ಡ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ನಮ್ಮಗೂ ಓಮಿಕ್ರೋನ್ ಆತಂಕ ಇದೆ, ನಮ್ಮಗೆ ಈ ಸಮಯದಲ್ಲಿ ಪರೀಕ್ಷೆ ಬೇಡ