ಬೆಂಗಳೂರು : ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ `ಮದ್ರಾಸ್ ಐ’ ಈ ಬಾರಿ ಅವಧಿಗೂ ಮುನ್ನ ಮಳೆಗಾಲದಲ್ಲೇ ಎಂಟ್ರಿ ಕೊಟ್ಟು ರಾಜ್ಯದ ಜನರ ಕಣ್ಣು ಕೆಂಪಗಾಗಿಸುತ್ತಿದೆ. ಮದ್ರಾಸ್ ಐ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಮಕ್ಕಳೇ ಈ ವೈರಾಣುವಿನ ಟಾರ್ಗೆಟ್ ಎಂದು ಹೇಳಲಾಗಿದೆ. ಪ್ರತಿದಿನ 60 ರಿಂದ 80 ಕೇಸ್ಗಳು ರಾಜ್ಯದಲ್ಲಿ ದಾಖಲಾಗುತ್ತಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಕಂಜಕ್ಟಿವೈಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ `ಕಣ್ಣು’ ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ.