ಆ ಪುಟ್ಟ ಮಗು ಎಂದಿನಂತೆ ಅಂಗನವಾಡಿಗೆ ಹೋಗಿತ್ತು. ಸರಿ ತಪ್ಪು ಏನು ಅಂತ ಗೊತ್ತಿರದ ವಯಸ್ಸು ಆತನದ್ದು. ಅಂಗನವಾಡಿಯಲ್ಲಿ ಪಾಠ ಮಾಡಿ ಮಗುವಿಗೆ ಶಿಸ್ತು ಕಲಿಸಬೇಕಾದ ಶಿಕ್ಷಕಿಯೇ ಆ ಮಗುವಿನ ಪಾಲಿಗೆ ವಿಲನ್ ಆಗಿದ್ದು, ಮಗುವಿನ ಕತ್ತು ಕೊಯ್ದು ಹಲ್ಲೆ ನಡೆಸಿದ್ದಾಳೆ. ಅಂಗನವಾಡಿ ಶಿಕ್ಷಕಿಯೊಬ್ಬರು ಮಗುವೊಂದರ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಕಸಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೃಥ್ವಿರಾಜ್(7)