ರಾಜ್ಯದ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೇ ಆರಂಭಗೊಂಡಿರುವಂತೆ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ, ಶಾಸಕರ ಒತ್ತಾಯ ತೀವ್ರವಾಗುತ್ತಿದೆ. ಹೀಗಾಗಿ ಅತೃಪ್ತರನ್ನು ಶಮನ ಮಾಡಲು ಡಾ.ಜಿ.ಪರಮೇಶ್ವರ ಪಕ್ಷದ ಸಚಿವರೊಂದಿಗೆ ಉಪಹಾರ ಕೂಟ ಏರ್ಪಡಿಸಿದ್ದರು.ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಕಾಂಗ್ರೆಸ್ ಸಚಿವರೊಂದಿಗೆ ಉಪಹಾರ ಕೂಟ ನಡೆಸಿ, ರಾಜ್ಯದ ಆಗುಹೋಗುಗಳ ಕುರಿತು ಚರ್ಚೆ ನಡೆಸಿದರು. ಆ ಮೂಲಕ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಬೇಗುದಿ, ಅತೃಪ್ತಿಯನ್ನು ಶಮನ ಗೊಳಿಸುವ ಕೆಲಸವನ್ನೂ ಮಾಡಿದರು. ನಾವೆಲ್ಲರೂ ಒಂದಾಗಿ ಕೆಲಸ