ಮೂಢ ನಂಬಿಕೆಗೆ ಹೆದರಿ ಆ ಗ್ರಾಮಸ್ಥರು ಊರನ್ನೇ ತೊರೆದಿದ್ದಾರೆ. ಜ್ಯೋತಿಷಿ ಭವಿಷ್ಯಕ್ಕೆ ಹೆದರಿ ಊರು ಬಿಟ್ಟ ಇಡೀ ಗ್ರಾಮದ ಜನರು ಪರ ಸ್ಥಳಕ್ಕೆ ತೆರಳಿದ್ದಾರೆ. ಆ ಗ್ರಾಮ ಈಗ ಬಿಕೋ ಎನ್ನುತ್ತಿದೆ. ಚಂದ್ರ ಗ್ರಹಣದ ವೇಳೆಗೆ ಗ್ರಾಮ ತೊರೆಯದಿದ್ದರೆ ರಕ್ತಕಾರಿ ಸಾಯುವ ಭೀತಿಯಿದೆ ಎಂದು ನುಡಿದ ಭವಿಷ್ಯಕ್ಕೆ ಇಡೀ ಗ್ರಾಮದ ಜನರು ಹೆದರಿದ್ದಾರೆ. ಹೀಗಾಗಿ ಚಂದ್ರಗ್ರಣ ದಿನದವೊತ್ತಿಗೆ ಊರು ಬಿಡದಿದ್ದರೆ ಸಾಯುವ ಭಯದಿಂದ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ