ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ನಿದ್ದೆಗೆಟ್ಟು ಕಳ್ಳರನ್ನು ಖೆಡ್ಡಾಗೆ ಕೆಡವಲು ತಯಾರಿ ನಡೆಸುತ್ತಲೇ ಇರುತ್ತಾರೆ. ಇದೀಗ 40 ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಖಾಕಿ ಬಲೆಗೆ ಬೀಳಿಸಿದ್ದಾರೆ. ಜಾನ್ ಮೆಲ್ವಿನ್ ಬಂಧಿತ ಮನೆಗಳ್ಳನಾಗಿದ್ದಾನೆ. ಈತ ಜೈಲಿನಲ್ಲಿನ ಕೈದಿ ಜೊತೆ ಸೇರಿ ಮನೆಗಳ್ಳತನಕ್ಕೆ ಸ್ಕೆಚ್ ಹಾಕ್ತಿದ್ದ ಎಂಬ ಮಾಹಿತಿ ತನಿಖೆ ವೇಳೆ ತಿಳಿದು ಬಂದಿದೆ. ಬೆಂಗಳೂರಿನ ಜಯನಗರ ಪೊಲೀಸರು ಜಾನ್ ಮೆಲ್ವಿನ್ನನ್ನು ಬಂಧಿಸಿದ್ದು, ಬರೋಬ್ಬರಿ 800