ನನ್ನ ಮೇಲೆ ಯುದ್ಧ ಮಾಡುವವರ ವಿರುದ್ಧ ಯುದ್ಧಕ್ಕೆ ಸಿದ್ದವಾಗಿದ್ದೇನೆ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಸವಾಲ್ ಹಾಕಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಏನೆಂದು ಬಿಜೆಪಿಯವರೇ ಸಾಬೀತುಪಡಿಸಬೇಕು. ನನ್ನ ಭ್ರಷ್ಟಾಚಾರವನ್ನು ಬಿಜೆಪಿಯವರೇ ಸಾಬೀತುಪಡಿಸಲಿ ಎಂದು ಗುಡುಗಿದ್ದಾರೆ. ನನ್ನ ಮನೆಗಳ ಮೇಲೆ ದಾಳಿ ಮಾಡಿದ ಇಷ್ಟು ದಿನಗಳ ನಂತರ ಬಿಜೆಪಿ ನಾಯಕರು ನಿದ್ರೆಯಿಂದ ಎಚ್ಚೆತ್ತಿದ್ದಾರೆಯೇ ಎಂದು ಲೇವಡಿ ಮಾಡಿದ ಅವರು, ರಾಜಕೀಯದಲ್ಲಿ ಭ್ರಷ್ಟಾಚಾರ ತಂದವರೇ ಬಿಜೆಪಿಯವರು ಎಂದು ತಿರುಗೇಟು