Widgets Magazine

ಪತ್ನಿಯ ಅನೈತಿಕ ಸಂಬಂಧಕ್ಕೆ ಯೋಧ ಬಲಿ

ಬೆಳಗಾವಿ| Jagadeesh| Last Modified ಭಾನುವಾರ, 23 ಫೆಬ್ರವರಿ 2020 (16:40 IST)
ಪತ್ನಿಯ ಅನೈತಿಕ ಸಂಬಂಧ ಕಾರಣದಿಂದಾಗಿ ಯೋಧನೊಬ್ಬ ಅಮಾನವೀಯವಾಗಿ ಕೊಲೆಯಾಗಿದ್ದಾನೆ.

ದೀಪಕ್ ನನ್ನು ಪತ್ನಿ ಅಂಜಲಿ ಹಾಗೂ ಪ್ರಿಯಕರ ಪ್ರಶಾಂತ್ ಮತ್ತು ಇನ್ನಿಬ್ಬರು ಕೊಲೆ ಮಾಡಿದ್ದಾರೆ.

ಹೊಸ ಮನೆ ಕಟ್ಟಿಸಿ ಪತ್ನಿಗೆ ಕಾರು ಕೊಡಿಸಿದ್ದೇ ಯೋಧನ ಕೊಲೆಗೆ ಕಾರಣವಾಗಿದೆ. ಕಾರು ಚಾಲಕನಾಗಿದ್ದ ಪ್ರಶಾಂತ್ ಯೋಧನ ಪತ್ನಿ ಅಂಜಲಿ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡು ಅಕ್ರಮ ಸಂಬಂಧ ಬೆಳೆಸಿದ್ದಾಳೆ.

ಅಕ್ರಮ ಸಂಬಂಧಕ್ಕೆ ಗಂಡನಾಗಿರೋ ಸೈನಿಕ ದೀಪಕ್ ಅಡ್ಡಿಯಾಗುತ್ತಾನೆ ಅಂತ ಯೋಚಿಸಿದ ಪತ್ನಿ ಅಂಜಲಿ ತನ್ನ ಪ್ರಿಯಕರ ಪ್ರಶಾಂತ್ ಹಾಗೂ ಆತನ ಗೆಳೆಯರಿಬ್ಬರ ನೆರವಿನಿಂದ ಯೋಧನನ್ನು ಕೊಲೆ ಮಾಡಿದ್ದಾರೆ.

ಇದೀಗ ಅಂಜಲಿ ಹಾಗೂ ಪ್ರಶಾಂತ್ ನನ್ನು ಪೊಲೀಸರು ಬಂಧನ ಮಾಡಿದ್ದು, ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


ಇದರಲ್ಲಿ ಇನ್ನಷ್ಟು ಓದಿ :