ಜಮ್ಮು ಕಾಶ್ಮೀರದಲ್ಲಿ ಉಗ್ರರ ಜೊತೆ ಹೋರಾಡಿ ವೀರ ಮರಣ ಹೊಂದಿದ ವೀರಯೋಧ ಪ್ರಕಾಶ ಜಾಧವ ಮಣ್ಣಲ್ಲಿ ಮಣ್ಣಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೂಧಿಹಾಳ ಗ್ರಾಮದಲ್ಲಿ ವೀರ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ನೆರವೇರಿತು.ಯೋಧ ಪ್ರಕಾಶ ಸಾವಿನಿಂದಾಗಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದಲ್ಲಿ ಯೋಧನ ಪಾರ್ಥಿವ ಶರಿರದ ಮೆರವಣಿಗೆ ನಡೆಸಲಾಯಿತು. ಯೋಧನ ಅಂತ್ಯಕ್ರಿಯೆಗೆ ಸುತ್ತಲು ಹತ್ತಾರು ಗ್ರಾಮದ ಜನ ಸಾಗರವೇ ಹರಿದು ಬಂದಿದ್ದು ಅಮರ ರಹೆ,