ಭಾರಿ ಮಳೆಯಿಂದಾಗಿ ಕಡಲ ನೀರು ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿ ಕಡಲ ತಡಿಯ ಜನರು ಆತಂಕದಲ್ಲಿ ಕಾಲ ದೂಡುವಂತಾಗಿದೆ. ಕಡಲ ಕೊರೆತ ಕೂಡ ತೀವ್ರಗೊಂಡಿದ್ದು, ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮ ಪಂಚಾಯಿತಿ, ಕೋಡಿ ಹಳೆಅಳವೆಯಲ್ಲಿ ತೀವ್ರ ಕಡಲ ಕೊರೆತ ಸಂಭವಿಸಿದ್ದು, ಮನೆ ಅಂಗಳಕ್ಕೂ ಅಲೆ ನುಗ್ಗಿದೆ. ಹೀಗಾಗಿ ಅಲ್ಲಿನ ಪರಿಸರ ವಾಸಿಗಳಲ್ಲಿ ಆತಂಕ ಮೂಡಿಸಿದೆ. ಕಳೆದ ಮೂರು ದಿನದಿಂದ ಕೋಡಿ ಪರಿಸರದಲ್ಲಿ ಕಡಲ ಅಬ್ಬರ ಜಾಸ್ತಿಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ