ಹಿಂಗಾರು ಮಳೆಯು ಬಾರದೆ ಸಂಪೂರ್ಣ ಕೈಕೊಟ್ಟಿರುವುದರಿಂದ ಡಿ. 1ರಿಂದ ಕಾಲುವೆಗೆ ನೀರನ್ನು ಹರಿಸೋದನ್ನು ಸ್ಥಗಿತಗೊಳಿಸಲಾಗುತ್ತಿದೆ.ಗಂಡೋರಿನಾಲಾ ಜಲಾಶಯದಲ್ಲಿ ಸಧ್ಯಕ್ಕೆ 1.320 ಟಿಎಂಸಿ ನೀರು ಲಭ್ಯವಿದೆ. ಈ ನೀರನ್ನು ಬೇಸಿಗೆವರೆಗೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಹಿಂಗಾರು ಮಳೆಯು ಬಾರದೆ ಸಂಪೂರ್ಣ ಕೈಕೊಟ್ಟಿರುವುದರಿಂದ ಅನಿವಾರ್ಯವಾಗಿ ಕಾಲುವೆ ನೀರನ್ನು 2018ರ ಡಿಸೆಂಬರ್ 1 ರಿಂದ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಐಪಿಸಿ ವಿಭಾಗ ನಂ. 1ರ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.