ಮದುವೆ ಮನೆಯಲ್ಲಿ ಕಳೆದುಕೊಂಡಿದ್ದ 42 ಗ್ರಾಂ ಚಿನ್ನದ ಸರವನ್ನು ಚಾಮರಾಜನಗರದ ರಾಮಸಮುದ್ರ ಬಡಾವಣೆಯ ನಿರ್ಮಲಾ ನಾಗರಾಜು ಎಂಬ ಮಹಿಳೆ ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಡಾ. ಅನ್ನಪೂರ್ಣ ಮತ್ತು ಡಾ. ಗುರುಪ್ರಸಾದ್ ಎಂಬುವರ ವಿವಾಹದ ಸಂದರ್ಭದಲ್ಲಿ ರಾಮಸಮುದ್ರದವರೇ ಆದ ಬ್ರಿಜೇಶ್ ಕುಮಾರ್ ಪತ್ನಿ ಭಾನುಮತಿ ಅವರ, 42 ಗ್ರಾಂ ತೂಕದ ಸುಮಾರು 2.30 ಲಕ್ಷ ಮೌಲ್ಯದ ಚಿನ್ನದ ಸರವನ್ನು ಜನಜಂಗುಳಿ ನಡುವೆ ಕಳೆದುಕೊಂಡಿದ್ದರು. ಚಿನ್ನದ ಸರ ಕಳೆದುಕೊಂಡ ಭಾನುಮತಿ ಚಿನ್ನದ