Widgets Magazine

ವಿಶ್ವವಿಖ್ಯಾತ ಉತ್ಸವ ಈ ಬಾರಿ ಅತೀ ಸರಳ

ಬಳ್ಳಾರಿ| Jagadeesh| Last Modified ಶನಿವಾರ, 17 ಅಕ್ಟೋಬರ್ 2020 (17:00 IST)
ವಿಶ್ವವಿಖ್ಯಾತ ಉತ್ಸವವನ್ನು ಈ ಬಾರಿ ಅತೀ ಸರಳವಾಗಿ ಆಚರಣೆ ಮಾಡಲು ಸರಕಾರ ಮುಂದಾಗಿದೆ.

ಸಂಪ್ರದಾಯದಂತೆ ನವೆಂಬರ್  ಮೊದಲ‌ ವಾರದಲ್ಲಿ ಅತಿ ಸರಳವಾಗಿ ಹಂಪಿಯ ಉತ್ಸವ ಆಚರಿಸಲಿದೆಂದು ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದ್ದಾರೆ.

ಕೋವಿಡ್ – 19 ಹಿನ್ನೆಲೆಯಲ್ಲಿ ಉತ್ಸವಗಳನ್ನು ಆಚರಿಸುವುದು ಅಷ್ಟೊಂದು ಸರಿಯಲ್ಲ‌. ಏಕೆಂದರೆ ಅಲ್ಲಿ ‌ಸಾವಿರಾರು ಜನ‌ ಸೇರುತ್ತಾರೆ. ಆದರೆ ಮೈಸೂರು ದಸರಾವನ್ನು ಸರಳವಾಗಿ ಮತ್ತು ಸಂಪ್ರದಾಯದಂತೆ ಆಚರಿಸುತ್ತಿರುವುದರಿಂದ ಹಂಪಿ  ಉತ್ಸವವನ್ನು ಸರಳವಾಗಿ ಆಚರಿಸಲು ಚಿಂತನೆ ನಡೆದಿದೆ ಎಂದಿದ್ದಾರೆ.

ಒಂದು ದಿನದ ಮಟ್ಟಿಗೆ ಸ್ಥಳೀಯ ಕಲಾವಿದರಿಂದ ಉತ್ಸವ ಆಚರಿಸಬೇಕೆಂಬ ಆಶಯ ತಮ್ಮದಾಗಿದೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :