ಮನೆಮಂದಿ ಶುಭಕಾರ್ಯಕ್ಕೆ ತೆರಳಿದ್ದ ವೇಳೆಯಲ್ಲಿ ಯುವಕನೊಬ್ಬ ಸಾವಿನ ಮನೆ ಸೇರಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಮನೆಯ ಕೊಠಡಿಯೊಳಗೆ ನಾಡಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಸುಬ್ರಹ್ಮಣ್ಯದ ನಾಲ್ಕೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜತ್ತಿಲ ಮನೆ ನಿವಾಸಿ ಪ್ರತಾಪ್(24) ಎಂಬವರು ಮನೆಯ ಕೊಠಡಿ ಒಳಗೆ ನಾಡಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕೃಷಿಕ ಜತ್ತಿಲ ಜನಾರ್ಧನ ಎಂಬುವರ ಪುತ್ರ ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಅವರು ತವರಿಗೆ ಮರಳಿದ್ದರು.